Librería Samer Atenea
Kálamo Books
Librería Elías (Asturias)
Librería Kolima (Madrid)
Librería Proteo (Málaga)
ಈ ಕಥೆ ಎಲ್ಲಾ ವಯಸ್ಸಿನವರಿಗೂ ಅನ್ವಯಿಸುತ್ತದೆ. ಇದೊಂದು ಚಿಕ್ಕ ಪುಸ್ತಕವಾಗಿದ್ದು, ಇದನ್ನು ಓದಲು ನಿಮಗೆ ಒಂದು ಗಂಟೆಗಿಂತ ಕಡಿಮೆ ಸಮಯ ಹಿಡಿಯಬಹುದು. ಆದರೆ ಇದರಲ್ಲಿನ ವಿಶಿಷ್ಟ ಸೂಕ್ಷ್ಮ ಒಳನೋಟಗಳು ಜೀವನವಿಡೀ ನಿಮ್ಮಲ್ಲಿ ಉಳಿಯುತ್ತವೆ.’ಹೂ ಮೂವ್ಡ್ ಮೈ ಚೀಸ್?’(’ನನ್ನ ಚೀಸನ್ನು ಯಾರು ಸ್ಥಳಾಂತರಿಸಿದರು?’) ಜೀವನದ ಸತ್ಯಗಳನ್ನು ತಿಳಿಸುವ ಸರಳ ಹಾಗೂ ಪ್ರಭಾವಿ ಕಥೆ. ಇದು ಮೇಜ಼್‌ನಲ್ಲಿ ವಾಸಿಸುವ ಮತ್ತು ತಮ್ಮನ್ನು ಪೋಷಿಸಿಕೊಳ್ಳಲು ಚೀಸನ್ನು ಹುಡುಕುವ ಮತ್ತು ತಮ್ಮ ಇಷ್ಟದ ಚೀಸನ್ನು ತಿನ್ನುತ್ತಾ ಆನಂದಿಸುವ ನಾಲ್ಕು ಮನರಂಜಿತ ಪಾತ್ರಗಳ ಮೂಲಕ ಆಳವಾದ ತಿಳುವಳಿಕೆಯನ್ನು ಮೂಡಿಸುವ ಕಥೆಯಾಗಿದೆ.ಈ ಕಥೆಯಲ್ಲಿ ’ಚೀಸ್’ ನಮ್ಮ ಜೀವನದ ಆಶಯಗಳ ಪ್ರತೀಕವಾಗಿದೆ; ಅದು ಉತ್ತಮ ಕೆಲಸ, ಪ್ರೀತಿಪಾತ್ರ ಸಂಬಂಧಗಳು, ಸಂಪತ್ತು, ಆರೋಗ್ಯ ಅಥವಾ ಆಧ್ಯಾತ್ಮಿಕ ಮನಸ್ಸಿನ ಶಾಂತಿ ಅಥವಾ ನಾವು ಪಡೆದುಕೊಳ್ಳಬಯಸುವ ಇನ್ನೇನಾದರೂ ಆಗಿರಬಹುದು.ಮೇಜ಼್ ನಾವು ನಮಗೆ ಬೇಕಾದುದನ್ನು ಹುಡುಕುವ ಸ್ಥಳವಾಗಿದೆ; ಅದು ನಾವು ಕೆಲಸ ಮಾಡುವ ಸಂಸ್ಥೆ, ಅಥವಾ ನಾವು ವಾಸಿಸುವ ಕುಟುಂಬ, ಸಮುದಾಯ ಅಥವಾ ಬೇರೆ ಯಾವುದೋ ಸ್ಥಳ ಆಗಿರಬಹುದು.ಅತೀ ಹೆಚ್ಚು ಪುಸ್ತಕಗಳು ಮಾರಾಟವಾಗುವ ಪ್ರಸಿದ್ಧ ಲೇಖಕ ಸ್ಪೆನ್ಸರ್ ಜಾನ್ಸನ್, ಎಂ.ಡಿ. ಅವರ ಈ ಅರ್ಥಪೂರ್ಣ ಕೃತಿ, ನಿಮಗೆ ಕಲಿಸುತ್ತದೆ:- ಬದಲಾವಣೆಯ ನಿರೀಕ್ಷೆ- ತ್ವರಿತವಾಗಿ ಬದಲಾವಣೆಗೆ ಹೊಂದಿಕೊಳ್ಳುವುದು- ಬದಲಾವಣೆಯನ್ನು ಆನಂದಿಸುವುದು- ತ್ವರಿತವಾಗಿ, ಮತ್ತೆ ಮತ್ತೆ ಬದಲಾವಣೆಗೆ ಸಿದ್ಧರಾಗುವುದುಬನ್ನಿ, ಈ ರಹಸ್ಯವನ್ನು ನೀವೇ ಅರಿತುಕೊಳ್ಳಿ ಮತ್ತು ಬದಲಾವಣೆಗೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಕಲಿಯಿರಿ.